top of page

Social and Literature Activities

ಆ ವಿಧಿಯಾಟದ ವಿಪರ್ಯಾಸ/
 

ಗಮನಿಸಿದೆ ಸುರ ಸುಂದರ ಮಹಿಳೆಯ
ನಾ ಪಯಣಿಸುತಿರುವ ವಾಹನದಲ್ಲಿ/
ಸೌಂದರ್ಯ ಮೈವೆತ್ತಿರುವ ನಾರಿಯ/
ಆಕರ್ಷಕ ಕೇಶ ವಿನ್ಯಾಸ ಸಿಂಗಾರದಲ್ಲಿ/

ತಾರುಣ್ಯವ ತನುವೆತ್ತಿರುವ ತರುಣಿಯು/
ಗುಲಾಬಿಯ ಹೊಂಗೆಂಪಿನ ಕೆನ್ನೆಗಳು/
ಪುಷ್ಪದಳ ಮೃದುವಿನ ಕೊಮಲೆಯು/
ಅರಳಿದ ತಾವರೆ ಹೂಗಳ ಕಣ್ಣುಗಳು/

ಅವಳ ರೂಪಕೆ ನನ್ನ ರೂಪವ ಹೊಲಿಸಿದೆ/
ಮತ್ಸರ ತುಂಬಿ ತುಳುಕಿತು ಮನದಾಳದಲ್ಲಿ/
ವಿಕಸಿಸಿದ ಕುಸುಮಗಳಂದಕೆ ಸಾದೃಶ್ಯಸಿದೆ /
ಅಸೂಯೆ ಪ್ರವಾಹವಾಗಿ ಬಂತು ಚಿತ್ತದಲ್ಲಿ/

ತಲುಪದಾಣ ಅಷ್ಟರಲ್ಲೇ ಸಮೀಪವಾಯಿತು/
ಕುತೂಲಹದಲ್ಲಿ ಅಂದಚಂದದ ತರುಣಿಯ ಬಳಿ ಹೋದೆ/
ಊರುಗೋಲು ನೇತೃತ್ವದ ಶ್ವಾನ ಕಾಣಿಸಿತು/
ಕಿವಿಯಲ್ಲಿ ಕೇಳುಹ ಚೂಟಿ ನೋಡಿ ನಾ  ದಿಗ್ಬ್ರಾಂತನಾದೆ/

ಅರಿವಾಯಿತಾಗ ಆ ವಿಧಿಯಾಟದ ವಿಪರ್ಯಾಸ/
ಭಗವಂತನಿಗೆ ದನ್ಯತೆಯಲ್ಲಿ ಕೃತಜ್ಞತೆಯ ಅರ್ಪಿಸಿದೆ /  
ಇರುವುದರಲ್ಲಿ ತೃಪ್ತಿಯಾಗಿರುವುದೇ ಸಮಂಜಸ/ 
ಸಹೃದಯದಲ್ಲಿ ಆ ತರುಣಿಯ ಸೌಖ್ಯಕೆ ಪ್ರಾರ್ಥಿಸಿದೆ

ಬಹು ದಿನಗಳ ನಂತರ ....
 

ಇಟ್ಟಂತೆಲ್ಲಾ ಕಾಲೇಜು ಅವರಣದಿ ಹೆಜ್ಜೆ 
ಮಾನದಾಳದಿ ನುಡಿದಿತ್ತು - ಕುಣಿದಿತ್ತು 
ನೆನಪುಗಳ ನಾದ -ಗೆಜ್ಜೆ.
 

ನಡೆದಿರಲು ಪಾಠ ಕಲಿಸಿದ ಸರಸ್ವತಮ್ಮನ 
ಗುಡಿಗೆ ಸಿಂಗಾರ 
ಸುಂದರ ನಾಲ್ವಡಿ ಒಡೆಯರ ಪ್ರತಿಮೆ 
ತಂದ ಸಂತಸ ಅಪಾರ.
 

ವಿದ್ಯಾದಾನ ನೀಡಿದ ನಿತ್ಯ ಪೂಜ್ಯ ಮಾರ್ಗದರ್ಶಕರು 
ಒಡನಾಡಿದ ಗೆಳೆಯ-ಗೆಳತಿಯರು,

 

ಹದಿಹರೆಯದ ತುಡಿತಕ್ಕೆ ಬೆನ್ನಾಗುತಿದ್ದ 
ಕಾಲೇಜು ನೋಟೀಸ್ ಬೋರ್ಡು 
ಬರೇ ಒಂದು ಕುಡಿನೋಟ- ಮುಗುಳ್ನಗೆಗೆ 
ಜೀವನ ಸುಂದರ ಕನಸುಗಳ ಯಾರ್ಡು. 

 

ಒಂದು ಎರಡಲ್ಲ ..ನೆನಪುಗಳ ಕಂತೆ ಕಂತೆ 
ತಕ ಥೈ ...ನನ್ನೊಳಗೆ ನಿಶ್ಯಬ್ದ ಸಂತೆ.

 

ಹೇಳಲಾಗದ ತಹ ತಹ 
ಎಂತಹದೋ ಸಂಕಟ 
ಗೆಳೆಯ ಗೆಳತಿಯರ ಸಂಬಂಧ ಮರುಕಳಿಸಿ
ಉಕ್ಕುಕ್ಕಿ ಬಂದ ನೆನಪಾಳದ ಅನುಬಂಧ.

 

ಅದೆಷ್ಟು ಸತ್ಯ ...ಹಿಂದಿನದ ನೆನೆದು ಹಿಮ್ಮಡಿ ತೊಳೆಯೆಂದ ಅಪ್ಪನ ನಾಣ್ನುಡಿ 
ಜೀವವಾಹಿನಿ ತುಂಬಿ  ಈ ಯಾಗಶಾಲೆ ಮಿಡಿದಿರೆ ನಮ್ಮೆಲ್ಲರ ಜೀವನಾಡಿ.
 

ಲೋಕೇಶ 
01/25/2024

ನಲ್ಬೆಳಗು ನಗುತಿದೆ  ನಲಿವಿನಲ್ಲಿ 
ನಲ್ಬೆಳಗು ನಗುತಿದೆ ನಲಿವಿನಲ್ಲಿ/
ಮುಂಬಗಲಿನ ನಸುನಗೆಯ ಮಂದಹಾಸದಲ್ಲಿ/
ನಲ್ಬೆಳಗು ನಗುತಿದೆ ನಲಿವಿನಲ್ಲಿ/
ಮುಂಬೆಳಗಿನ ಮುಗುಳ್ನಗೆಯ ಮಂದಸ್ಮಿತದಲ್ಲಿ/

ಭಾಸ್ಕರನು ಬೆಳಗಿರುವನು ಭವ್ಯತೆಯಲ್ಲಿ/
ಹೊಳೆಗಳು ಹರಿಯುತಿದೆ ಹರುಷದಲ್ಲಿ/
ಇಬ್ಬನಿಯು ಮಿನುಗುತಿದೆ  ಹಸಿರೆಲೆಗಳಲ್ಲಿ/
ಹಕ್ಕಿಗಳು ಚಿಲಿಪಿಲಿಗುಟ್ಟಿದೆ ಸುಸ್ವರದಲ್ಲಿ/

ನೇಸರನು ಮೂಡಿರುವನು ವಿಶ್ವರೂಪದಲ್ಲಿ/
ಭೂಲೋಕವ ಶೋಭಿಸಲು ಕಾಂತಿಯಲ್ಲಿ 
ಜಗದೀಶನು ಹರಸಿರುವನು ಕಾರುಣ್ಯದಲ್ಲಿ/
ಜೀವಜೀವಗಳಿಗೆ ಜೀವಿಸಲು ಧನ್ಯತೆಯಲಿ

ಜ್ಞಾನವ ಬೆಳಗಿಸಿ ಅಜ್ಞಾನವ ನಿರ್ನಾಮಿಸಿ 
ಜ್ಞಾನವ ಬೆಳಗಿಸಿ ಅಜ್ಞಾನವ ನಿuರ್ನಾಮಿಸಿ 
ಬೆಳಗು ಹೃದಯದಂಗಳವ ದೀಪ ಜ್ವಾಲೆಯೇ 
ಅಭಿಜ್ಞಾನವ ವೃದ್ಧಿಸಿ ತಾಮಸವ ತೊಲಗಿಸಿ /
ಪ್ರಕಾಶಿಸು ಎದೆಯಂಗಳವ ದೀಪ ಜ್ವಾಲೆಯೇ
 

ಕವಿದಿರುವ ಕತ್ತಲೆಯನು ಕರಗಿಸಿ ತಿಳುವಳಿಕೆಯಲ್ಲಿ/
ಕಲ್ಪಿಸು ಕಲ್ಮಶಗಳಿಲ್ಲದ ಬಾವನೆಗಳ ಮನದಾಳದಲ್ಲಿ 
ಮುಸುಕಿರುವ ಮಬ್ಬನು ಚದುರಿಸಿ ಸಂಜ್ಞಾನದಲಿ/
ಕಂಗೊಳಿಸು ಕಣ್ಣುಗಳಲ್ಲಿ ವೈದುಷ್ಯದ ಚಿತ್ತಪ್ರಜ್ಞೆಯಲ್ಲಿ /

ಬಾಳ ಪಯಣದಲ್ಲಿ ಮಾರ್ಗದರ್ಶಿಯಾಗಿರು ಕಾರುಣ್ಯದಲಿ /
ಮೈಗಾವಲಾಗಿರು ಜೀವನದಲ್ಲಿ ಹಗಲಿರುಳು ಕಕ್ಕುಲತೆಯಲಿ /
ಕೈಗೊಡುವ ಕಾರ್ಯಗಳಲ್ಲಿ ದಿವ್ಯಧೃಷ್ಟಿಯಾಗಿರು ದಯೆಯಲಿ /
ಬೆಂಗಾವಲಾಗಿರು ನೆಡೆನುಡಿಯಲ್ಲಿ ಅನವರತವಾಗಿ ಕೃಪೆಯಲಿ /

ಬನ್ನಿರಿ ಶುದ್ಧ ಪರಿಶುದ್ಧ ಮನಸಿನಲಿ
 

ಬನ್ನಿರಿ ಶುದ್ಧ ಪರಿಶುದ್ಧ ಮನಸಿನಲಿ/
ಪೂಜ್ಯಭಾವದಲಿ ಸ್ವಾಗತಿಸುವ ಶ್ರೀರಾಮನ/
ಬನ್ನಿರಿ ಸ್ವಚ್ಛ ಶುಭ್ರ ಹೃದಯದಲಿ/
ಭಯಭಕ್ತಿಯಲಿ ಆಹ್ವಾನಿಸುವ ಶ್ರೀರಾಮನ/     

 

ಹಲವಾರು ಶತಮಾನಗಳ ಕನಸು/ 
ನನಸಾಗುತಿದೆ ಪೂಜ್ಯ ಪವಿತ್ರತೆಯಲಿ /  
ನಿಷ್ಠಾವಂತ ಭಕ್ತಾದಿಗಳ ತಪಸ್ಸು/ 
ಪಲವತ್ತಾಗುತಿದೆ ಅಯೋದ್ಯೆಯಲಿ/ 

 

ಶ್ರೀರಾಮನ ಅನುಷ್ಠಾನವಾಗುತಿದೆ/ 
ಧಾರ್ಮಿಕ ಶ್ರೀ ರಾಮ ಮಂದಿರದಲ್ಲಿ /
ಶ್ರೀರಾಮನ ಪ್ರತಿಷ್ಠಾನವಾಗುತಿದೆ/
ಆಧ್ಯಾತ್ಮಿಕ ಶ್ರೀ ರಾಮ ಮಂದಿರದಲ್ಲಿ/ 

 

ವನವಾಸವ ಮುಗಿಸಿ ಲಂಕೆಯ ದಹಿಸಿ/
ಬರುತಿರುವನು ತನ್ನ ಜನ್ಮಭೂಮಿಗೆ/ 
ನ್ಯಾಯ ನೀತಿಯ ಧರ್ಮವ ಸ್ಥಾಪಿಸಿ/
ಬರುತಿರುವನು ತನ್ನ ಜನ್ಮಭೂಮಿಗೆ/

ಬಾಲರಾಮ 
 

ಅಗ್ನಿಪುರುಷನ ವರದಿಂದಾದ ಶ್ರೀರಾಮನ ಜನನ /
ಸೆಳೆಯಿತು ದೇವ ದೇವತೆಗಳ ಅವಿಭಾಜ್ಯ ಗಮನ/

ಅಗ್ನಿಪುರುಷನ ವರದಿಂದಾದ ಶ್ರೀರಾಮನ ಜನನ /
ಸಂತೃಪ್ತಿಸಿತು ದೇವಲೋಕವ ಮಾಡಿದರು ನಮನ/

 

ದೇವತೆಗಳೆಲ್ಲರೂ ಕೂಡಿ ದೇವಕುಸುಮಗಳ ಅರ್ಪಿಸಿದರು/
ದೇವಶಕ್ತಿಯ ಪ್ರಬಾರಾಶಿಗಳು ಆವರಿಸಿತು ಅಯೋದ್ಯೆಯ/

ದೇವಗಾನದಲ್ಲಿ ಬಾಲರಾಮನ ವೈಶಿಷ್ಟವ ಮೊಳಗಿದರು/ 
ಪುರಜನರು  ಹಿಗ್ಗಿನಲ್ಲಿ ಅಲಂಕರಿಸಿದರು ಅಯೋದ್ಯೆಯ/

ಬಾಲರಾಮನು ಲೀಲೆಗಳಿಂದ ಎಲ್ಲರ ಮನವ ಸೆಳೆದನು/ 
ದಿನದಿನವೂ ವಿಕಸಿಸಿದನು ಮಮತೆಯ ಮಡಿಲಿನಲ್ಲಿ/
ದೈಹಿಕ ಮಾನಸಿಕ ಬೆಳವಣಿಗೆಯಲ್ಲಿ ಅತಿಶಯಿಸಿದನು/
ಸ್ವರೂಪಿಸಿದನು ಕ್ಷಮೆ ತಾಳ್ಮೆ ಸಹನೆ ಸಂಯಮದಲ್ಲಿ/

  

ಕಾಂತಿ ಪೂರ್ಣ ದಿವ್ಯ ತೇಜಸ್ಸಿನ ಬಾಲರಾಮನು/
ಹುಣ್ಣಿಮೆಯ ಬೆಳದಿಂಗಳಂತೆ ಪ್ರಕಾಶಿಸಿದನು/
ವಶಿಷ್ಠ ಗುರುಗಳಾಶ್ರಯದಲ್ಲಿ ವಿಶಾರನಾದನು/
ಸಕಲವಿದ್ಯೆ ಕೋವಿದನಾಗಿ ಯುವರಾಜನಾದನು

ರಾಮ  ಶ್ರೀರಾಮ ರಾಮ  ಶ್ರೀರಾಮ/

ರಾಮ  ಶ್ರೀರಾಮ ರಾಮ  ಶ್ರೀರಾಮ/
ನೀನೆನ್ನ ಚಿರಚೈತನ್ಯವು ನೀನೆನ್ನ ಚೇತನವು 
ರಾಮ  ಶ್ರೀರಾಮ ರಾಮ  ಶ್ರೀರಾಮ/
ನೀನೆನ್ನ ಅಂತರಾತ್ಮವು ನೀನೆನ್ನ ಮೋಕ್ಷವು/  

 

ಸಕಲವೂ ನೀನೆ ಪಾವನ ಪವಿತ್ರವೂ ನೀನೆ/
ನಿನ್ನ ನೆನಪಿನಲ್ಲಿ ಪಲಿಸುವುದು ನೆಮ್ಮದಿಯು/   
ಅಖಿಲವು ನೀನೆ ಶುದ್ಧ ಪರಿಶುದ್ದವು ನೀನೇ/
ನಿನ್ನ ಸ್ಮರಣೆಯಲ್ಲಿ ಫಲಿಸುವುದು ಶಾಂತಿಯು/ 

 

ರಾಮ  ಶ್ರೀರಾಮ ರಾಮ  ಶ್ರೀರಾಮ/
ನೀನೆನ್ನ ಚಿರಚೈತನ್ಯವು ನೀನೆನ್ನ ಚೇತನವು 
ರಾಮ  ಶ್ರೀರಾಮ ರಾಮ  ಶ್ರೀರಾಮ/
ನೀನೆನ್ನ ಅಂತರಾತ್ಮವು ನೀನೆನ್ನ ಮೋಕ್ಷವು/  

 

ನಿನ್ನೆಡೆ ಬರುವ ಚಿಂತೆಯಲ್ಲಿ ತಲ್ಲಿನವಾಗಿರಿಸು/
ನಿನ್ನ ಪೂಜ್ಯ ನಾಮ ಧ್ಯಾನದಲ್ಲಿ ಶಾಶ್ವತವಾಗಿರಿಸು/ 
ನಿನ್ನೆಡೆ ತೋರುವ ದಿಕ್ಕಿನಲ್ಲಿ ಮಗ್ನವಾಗಿರಿಸು/ 
ನಿನ್ನ ದಿವ್ಯ ನಾಮ ಜಪದಲ್ಲಿ ನಿರಂತರವಾಗಿರಿಸು/ 

 

ಕಾರುಣ್ಯದಲ್ಲಿ ವರ್ತಿಸುವ ಮನವ ಆಶೀರ್ವದಿಸು/
ನ್ಯಾಯ ನೀತಿಯಲ್ಲಿ ನೆಡೆಯಲು ನಿಯಂತ್ರಿಸು/
ಋಜುತ್ವದಲ್ಲಿ ಚಿಂತಿಸುವ  ಚಿತ್ತವ  ಅನುಗ್ರಹಿಸು/  
ಧರ್ಮ ಮಾರ್ಗದಲ್ಲಿ ಪಯಣಿಸಲು ನಿಗ್ರಹಿಸು/

ನಿನಗೆ ನೀನೆ ಆಸರೆ ನಿನ್ನ ಜೀವನದಲ್ಲಿ

ನಿನಗೆ ನೀನೆ ಆಸರೆ ನಿನ್ನ ಜೀವನದಲ್ಲಿ/
ನಿನ್ನ ಆತ್ಮವೇ ದೈವವು ನಿನ್ನ ಬಾಳಿನಲ್ಲಿ/
ಅತ್ಮಕ್ಕಿಂತ ಇಲ್ಲ ಬೇರೆ ನಿನ್ನ ನೆರವಿಗೆ/

ನಿನಗೆ ನೀನೆ ಆಸರೆ ನಿನ್ನ  ಜೀವನದಲ್ಲಿ/
ನಿನ್ನ ಆತ್ಮವೇ ದೈವವು ನಿನ್ನ ಬದುಕಿನಲ್ಲಿ/
ಅತ್ಮಕ್ಕಿಂತ ಇಲ್ಲ ಬೇರೆ ನಿನ್ನ ಒತ್ತಾಸೆಗೆ/

ಜನಿಸಿ ನಿನ್ನ ಜೊತೆಯಲಿ ಆತ್ಮವು ನಿನ್ನ
ಸಹಚಾರಿ ಜನ್ಮ ಜನ್ಮಕು/
ಜನ್ಮದಲಿ ಮರಣದಲಿ ಜೊತೆಯಾಗಿ ಬರುವುದು 
ಜನ್ಮ ಜನ್ಮಕು/

 

ನಿನ್ನ ಕಲ್ಯಾಣವೇ ಅದರ ದ್ಯೇಯ ಜನುಮ ಜನುಮಾಂತರದ ಅನುಬಂಧ/
ಕಿವಿಗೊಟ್ಟು ಕೇಳು ಅದರ ಹಿತೋಪದೇಶಕೆ ಬಾಳು ಧರ್ಮ ಕರ್ಮದಲ್ಲಿ/
ನಿನ್ನ ಸೌಖ್ಯವೇ ಅದರ ಹಿತಚಿಂತನೆ ಯುಗ ಯುಗಾಂತರದ ಸಂಬಂಧ/ 
ಆಲಿಸು ಅದರ ಧರ್ಮೋಪದೇಶಕೆ ಬದುಕು ನ್ಯಾಯ ನೀತಿಯಲಿ/

ನಿನಗೆ ನೀನೆ ಆಸರೆ,,,, 

 

ಆತ್ಮ ಶೋಧನೆಯಲ್ಲಿ ಅರಿವಾಗುವುದು ಅಡಗಿರುವ ಬಾಳಿನ ಭಾವಾರ್ಥ/
ಮಾರ್ಗದರ್ಶವಾಗುವುದು ಬಾಳ ಪಯಣದಲಿ ಬ್ರಾಂತಿ ಭ್ರಮೆಯಿಂದ ರಕ್ಷಿಸುವುದು/
ಆತ್ಮ ಅನ್ವೇಷಣೆಯಲ್ಲಿ ಕಾಣುವುದು ಬದುಕಿನ ಜೀವಾರ್ಥ/
ದಾರಿತೋರುಗವಾಗುವುದು ಜೀವನ ಯಾತ್ರೆಯಲಿ ಮೃಗಜಲದಿಂದ ಕಾಪಾಡುವುದು/

ಹೊಸ ವರುಷದ ಶಭಾಶಯಗಳು 

 

ಬರುತಿದೆ ನವನೂತನ ವರುಷವು ಭೂಲೋಕಕೆ

 

ಉರುಳುವ ಕಾಲಕೆ ನೃತ್ಯವ ಮಾಡುತ/
ನೂಪುರ ಮಾಡುವ ಝುಲ್ ಝುಲ್ ನಾದಕೆ/
ನಲಿಯುತ ಕುಣಿಯುತ ಕೇಕೆ ಹಾಕುತ/
ಬರುತಿದೆ ಹೊಸ ವರುಷವು ಭೂಲೋಕಕ್ಕೆ

 

ದೀಪವ ಹಚ್ಚಿರಿ ಆರತಿ ಬೆಳಗಿರಿ ಕೃತಜ್ಞತೆಯಲ್ಲಿ 
ಆಹ್ವಾನಿಸಿರಿ ಪರಮ ಪೂಜ್ಯ ಬಾವನೆಗಳಲ್ಲಿ/
ಹೂಗಳ ಚೆಲ್ಲಿರಿ ಪರಿಮಳ ಪ್ರಸರಿಸಿರಿ ಹರ್ಷದಲ್ಲಿ/
ಆಹ್ವಾನಿಸಿರಿ ಪರಮ ಪೂಜ್ಯ ಭಾವನೆಗಳಲ್ಲಿ/

ಹೊಳೆಯುವ ಮಿನುಗುವ ಉಡುಗೆ ತೊಡುಗೆಗಳಲಿ/
ಮಿನುಗನು  ಮೆರುಗನು ಸಿಂಪಡಿಸಿ ಪ್ರಪಂಚಕೆ/
ಮನ ಸೆಳೆಯುವ ಕಣ್ಸೆಳೆಯುವ ವಸ್ತ್ರಾಲಂಕಾರದಲಿ/
ಬರುತಿದೆ ಹೊಸ ವರುಷವು ಭೂಲೋಕಕ್ಕೆ

 

ಭಗವಂತನ ಕೃಪೆಗೆ ಶಿರಬಾಗಿ ಕೈಜೋಡಿಸಿ ನಮಿಸುವ 
ಬೇದಭಾವಗಳಿಲ್ಲದೆ ಭಿನ್ನಾಭಿಪ್ರಾಯವಿಲ್ಲದೆ ಬಾಳುವ 
ಯಾವ ಕಲಹ ಕೋಲಾಹಲವಿಲ್ಲದೆ ಒಂದಾಗಿ ಇರುವ/
ಪರಮಾತ್ಮನ ದಯೆಗೆ ಮಾನವೀಯತೆಯಲ್ಲಿ ಬದುಕುವ

 

ಸುಖ ಶಾಂತಿ ನೆಮ್ಮದಿ ಸದಾ ತುಳುಕುತಿರಲಿ/
ಸಂತಸ ಸಂತೋಷ ಸದಾ ನಿಮ್ಮದಾಗಿರಲಿ/
ಯಶಸ್ಸು ನಿಮ್ಮ ಬದುಕಲ್ಲಿ ವಿಪುಲವಾಗಿರಲಿ/
ನಿಮ್ಮ ಬಾಳು ಹಸನಾಗಿರಲಿ ಸುಗಮವಾಗಿರಲಿ/

ಆಶಾ ಮತ್ತು ರಾಮ್
ಡಿಸೆಂಬರ್ ೩೧ ೨೦೨೩ 

ಹಬ್ಬ ಹರಿದಿನಗಳ ಶುಭಾಶಯಗಳು

ಹಬ್ಬ ಹರಿದಿನಗಳ ಶುಭಾಶಯಗಳು/
ಎಲ್ಲರಿಗು ನಿಮಗೆಲ್ಲರಿಗೂ/
ಶುಭ ಸುದಿನಗಳ ಶುಭಾಶಯಗಳು/
ಎಲ್ಲರಿಗು ನಿಮಗೆಲ್ಲರಿಗೂ/

 

ಹೇಮಂತ ಋತುವಿನ ವಿಶೇಷತೆಯಲಿ/
ಆಡಂಬರಿಸಿದೆ ವೈಭವದಲ್ಲಿ ಧರ್ಮಾಚರಣೆಗಳು/
ಸಂಭ್ರಮಿಸಲು ಉಲ್ಲಾಸ ಉತ್ಸಾಹದಲಿ/
ವಿಜೃಂಭಿಸಿದೆ ಪಾವನ ಪವಿತ್ರ ಪುಣ್ಯ ದಿನಗಳು/
 
ಸಂತುಷ್ಟ ಸಂತೃಪ್ತ ಸಂತೋಷದ ಸುಸಮಯವು/
ದೈವದಾಶೀರ್ವಾದದಲ್ಲಿ ಪಲ್ಲವಿಸಿದೆ ಭುವಿಯಲ್ಲಿ/
ಹರಸಲು ಜೀವರಾಶಿಗಳ ಚಿರಚೇತನ ಚೈತನ್ಯವು
ಪ್ರಪುಲ್ಲತೆಯಲಿ ಪ್ರಸರಿಸಿದೆ ಎಲ್ಲ ದಿಕ್ಕು ದಿಕ್ಕುಗಳಲ್ಲಿ

 

ಬಾಗ್ಯ ಸೌಬಾಗ್ಯ ಯೋಗ ಸುಯೋಗದ ಕಾಲವು/
ದೈವಾದಾನುಗ್ರಹದಲ್ಲಿ ಅಂಕುರಿಸಿದೆ ಧರಣಿಯಲ್ಲಿ/
ಪುರಸ್ಕರಿಸಲು ಜೀವನವನು ಶಕ್ತಿ ಸಾಮರ್ಥ್ಯವು/
ವಿಪುಲತೆಯಲಿ ವ್ಯಾಪಿಸಿದೆ ಎಲ್ಲ ದಿಸೆ ದಿಸೆಗಳಲ್ಲಿ/

 

ಆನಂದಿಸಿ ನಿಮಿಷ ನಿಮಿಷವೂ ದೈವ ನೀಡಿರುವ ಪ್ರತಿಪಲನವ/
ದನ್ಯತೆಯಲ್ಲಿ ದೈವವ ಧ್ಯಾನಿಸಿರಿ ಪಡೆದು ಬಂದಿರುವ ಜನ್ಮಕೆ/
ಆಹ್ಲಾದಿಸಿ ಕ್ಷಣಕ್ಷಣವೂ ದೈವ ದಯಪಾಲಿಸಿರುವ ಅನುದಾನವ/
ಕೃತಜ್ಞತೆಯಲ್ಲಿ ದೈವವ ನೆನೆಯಿರಿ ಪಡೆದು ಬಂದಿರುವ ಜನ್ಮಕೆ/

 

ಆಶಾ ಮತ್ತು ರಾಮ್ 
ಡಿಸೆಂಬರ್ ೨೩ ೨೦೨೩

bottom of page